Friday, December 29, 2017

ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದ ಶುಭಾಶಯಗಳು

ರಾಷ್ಟ್ರ ಕವಿ ಕುವೆಂಪು ರವರ ಹುಟ್ಟು ಹಬ್ಬದ ದಿನವಾದ ಇಂದು ವಿಶೇಷವಾಗಿ ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುವುದು.

ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು.

ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. 

ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು.

ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು.

***ಕಾದಂಬರಿಗಳು+++
ಕಾನೂರು ಹೆಗ್ಗಡತಿ (ಚಲನ ಚಿತ್ರವಾಗಿದೆ)
ಮಲೆಗಳಲ್ಲಿ ಮದುಮಗಳು (ಧಾರಾವಾಹಿಯಾಗಿದೆ) 

***ನಾಟಕಗಳು*--
ಬೆರಳ್ಗೆ ಕೊರಳ್
ಶೂದ್ರ ತಪಸ್ವಿ
ಸ್ಮಶಾನ ಕುರುಕ್ಷೇತ್ರ 
ರಕ್ತಾಕ್ಷಿ 
ಬಿರುಗಾಳಿ 
ಯಮನ ಸೋಲು 
ನನ್ನ ಗೋಪಾಲ (ಮಕ್ಕಳ ನಾಟಕ) 
ವಾಲ್ಮೀಕಿಯ ಭಾಗ್ಯ 
ಮಹಾರಾತ್ರಿ 
ಜಲಗಾರ 
ಚಂದ್ರಹಾಸ 
ಬಲಿದಾನ 
ಮೋಡಣ್ಣನ ತಮ್ಮ (ಮಕ್ಕಳ ನಾಟಕ) 

***ಕಾವ್ಯಗಳು***
ಶ್ರೀ ರಾಮಾಯಣ ದರ್ಶನ೦
ಕೊಳಲು 
ಅಗ್ನಿಹಂಸ 
ಅನಿಕೇತನ 
ಅನುತ್ತರಾ 
ಇಕ್ಶುಗಂಗೋತ್ರಿ 
ಕದರಡಕೆ 
ಕಥನ ಕವನಗಳು 
ಕಲಾಸುಂದರಿ 
ಕಿಂಕಿಣಿ 
ಕೃತ್ತಿಕೆ 
ಜೇನಾಗುವ 
ನವಿಲು 
ಪಕ್ಷಿಕಾಶಿ 
ಚಿತ್ರಾಂಗದಾ 
ಪ್ರೇತಕ್ಯು 
ಪ್ರೇಮಕಾಶ್ಮೀರ 
ಮಂತ್ರಾಕ್ಷತೆ 
ಷೋಡಶಿ 
ಹಾಳೂರು 
ಕೋಗಿಲೆ 
ಪಾಂಚಜನ್ಯ 
ಕುಟೀಚಕ 

***ಕಥಾಸಂಕಲನ : **
ನನ್ನ ದೇವರು ಮತ್ತು ಇತರ ಕಥೆಗಳು

ವಿಮರ್ಶೆ : ದ್ರೌಪದಿಯ ಶ್ರೀಮುಡಿ

ಜೀವನ ಚರಿತ್ರೆ : ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ


ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು :--

1956-ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ.
1957-ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷ ಪದವಿ.
1964-ರಾಜ್ಯ ಸರ್ಕಾರದಿಂದ ರಾಷ್ಟ್ರ ಕವಿ ಬಿರುದಿನ ಗೌರವ.
1968-ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ.
1968-ರಾಷ್ಟ್ರಪತಿಗಳಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ.
1988-ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ ಪ್ರದಾನ.
1992-ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ.

1956ರಿಂದ95- 8 ಬೇರೆ-ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.


No comments:

Post a Comment