Wednesday, June 29, 2022
Saturday, November 30, 2019
Friday, March 1, 2019
Wednesday, February 27, 2019
Tuesday, November 6, 2018
Tuesday, September 11, 2018
Wednesday, June 20, 2018
Wednesday, June 13, 2018
Saturday, February 17, 2018
Chatrapati Shivaji Maharaj Jayanti
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭಾಶಯಗಳು
🚩ಜೈ ಶಿವಾಜಿ 🚩
ಫೆಬ್ರುವರಿ 19 ಭಾರತೀಯ ಸಂಸ್ಕೃತಿಗಳ ಮಹಾನ್ ಆರಾಧಕ ಶಿವಾಜಿ ಮಹಾರಾಜರ ಜನ್ಮದಿನ. ಭಾರತದ ಸಾಂಸ್ಕೃತಿಕ ಪರಂಪರೆಗಳು ನಮ್ಮವರೇ ಆದ ರಾಜರ ಕ್ಷುಲ್ಲಕತನ ಮತ್ತು ಮೊಗಲರ ಅಂಧ ಮತಶ್ರದ್ಧೆಯಿಂದ ದುರಾಕ್ರಮಣಕ್ಕೊಳಗಾಗಿದ್ದಾಗ ಅದನ್ನು ಚತುರತೆಯಿಂದ ಎದುರಿಸಿ ಅದಕ್ಕೆ ಸೋಲುಣಿಸಿ, ಮುಂದಿನ ಜನಾಂಗಗಳು ಭಾರತೀಯ ಸಂಸ್ಕೃತಿಯ ಗಾಳಿಯ ಲೇಪನವನ್ನಾದರೂ ಸವಿಯುವಂತೆ ಉಳಿಸಿ ಹೋದವರು ಶಿವಾಜಿ ಮಹಾರಾಜರು.
ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕೆ ಶ್ರಮಿಸಿದ ಭಾರತ ಮಾತೆಯ ಮತ್ತೊಬ್ಬ ಮಹಾನ್ ಪುತ್ರರಾದ ಸ್ವಾಮಿ ವಿವೇಕಾನಂದರು ಶಿವಾಜಿಯ ಕುರಿತು ಆಡಿದ ಮಾತುಗಳನ್ನು ನಾವೊಮ್ಮೆ ಗಮನಿಸಬೇಕು. “ಶಿವಾಜಿಯಂತಹ ಪರಾಕ್ರಮಿ, ಧರ್ಮಪುರುಷನ ಬಗ್ಗೆ ಹಗುರ ಮಾತುಗಳನ್ನಾಡುವವರಿಗೆ ನಾಚಿಕೆಯಾಗಬೇಕು. ನಮ್ಮ ಜನಾಂಗ, ಧರ್ಮ ಮತ್ತು ಸಂಸ್ಕೃತಿ ಎಲ್ಲವೂ ವಿನಾಶದ ತುದಿ ತಲುಪಿರುವಾಗ, ನಮ್ಮ ಧರ್ಮವನ್ನು ಸಮಾಜವನ್ನು ಉದ್ಧಾರ ಮಾಡಿದವನು ಆತ. ವಾಸ್ತವವಾಗಿ ಇಂತಹ ಯುಗಪುರುಷನ ಬರುವಿಗೆ ಜನ ಕಾದು ಕುಳಿತಿದ್ದರು. ಸಾಧು ಸಂತರು ತಪಸ್ಸು ನಡೆಸಿದ್ದರು. ಅಂತಹ ಕಾಲಘಟ್ಟದಲ್ಲಿ ಅವತರಿಸಿ, ಅಧರ್ಮವನ್ನು ಅಳಿಸಿ, ಧರ್ಮವನುಳಿಸಿದ ಯುಗಪುರುಷನಾತ. ಪ್ರತ್ಯಕ್ಷ ಶಿವನ ಅವತಾರ. ನಮ್ಮೆಲ್ಲ ಗ್ರಂಥಗಳಲ್ಲಿ ವರ್ಣಿಸಲಾದ ಸರ್ವ ಸದ್ಗುಣಗಳ ಸಜೀವ ಆಕಾರ. ಅವನಷ್ಟು ಶ್ರೇಷ್ಠ ಶೂರ, ಸತ್ಪುರುಷ, ಭಗವದ್ಭಕ್ತ ರಾಜ ಇನ್ನೊಬ್ಬನುಂಟೇ? ಭಾರತದ ಆತ್ಮಚೇತನದ ಪ್ರತ್ಯಕ್ಷ ರೂಪ ಅವನು. ಭಾರತದ ಭವಿತವ್ಯದ ಆಶಾದೀಪ ಅವನು”.
ಫೆಬ್ರುವರಿ 19, 1630 ಜುನ್ನಾರ್ ಸಮೀಪದ ಶಿವನೇರಿಯಲ್ಲಿ ಶಹಾಜಿರಾಜ್ ಬೋಂಸ್ಲೆ ಮತ್ತು ಜೀಜಾಬಾಯಿ ದಂಪತಿಗಳ ಮಗನಾಗಿ ಶಿವಾಜಿ ಜನಿಸಿದರು. ಚಿಕ್ಕವಯಸ್ಸಿನಿಂದಲೇ ತಾಯಿಯಿಂದ ಪೌರಾಣಿಕ ಕಥೆಗಳನ್ನು ಕೇಳುತ್ತಾ ಬೆಳೆದ ಶಿವಾಜಿ ಅವರಿಗೆ ಅವರ ಜೀವನದ ಕೊನೆಯವರೆಗೂ ಹಿಂದೂ ಮತ್ತು ಸೂಫಿ ಮುನಿಗಳ ವಿಫುಲ ಸಂಪರ್ಕವಿತ್ತು. ಸಾಮ್ರಾಜ್ಯ ತನಗಾಗಿ ಅಲ್ಲ ಧರ್ಮಕ್ಕಾಗಿ ಎಂಬುದು ಶಿವಾಜಿಯ ಪ್ರತ್ಯಕ್ಷ ವ್ಯವಹಾರ. 16ರ ವಯಸ್ಸಿನಿಂದ ಆರಂಭಿಸಿ, ಅಕ್ಷರಶಃ ರಕ್ತವನ್ನೇ ಬೆವರಾಗಿ ಹರಿಸಿ ಕೋಟೆಗಳನ್ನು ಗೆದ್ದು ಸಾಮ್ರಾಜ್ಯ ಸ್ಥಾಪಿಸಿ, ಈ ಸಾಮ್ರಾಜ್ಯ ತನ್ನದಲ್ಲ, ನಿಮ್ಮದು ಎಂದು ಸಮರ್ಥ ರಾಮದಾಸರ ಭಿಕ್ಷಾಜೋಳಿಗೆಗೆ ಹಾಕಿದವರು ಶಿವಾಜಿ.
ಬಿಜಾಪುರದ ಆಫಜಲಖಾನನಿಗೆ ಸೋಲುಣಿಸಿ, ಔರಂಗಜೇಬನಿಗೆ ಚಳ್ಳೆ ಹಣ್ಣು ತಿನ್ನಿಸಿದ್ದು ಮಾತ್ರವಲ್ಲದೆ ತನ್ನ ಸಾಮ್ರಾಜ್ಯದಲ್ಲಿ ವ್ಯವಸ್ಥಾತ್ಮಕವಾದ ಶ್ರೇಷ್ಠ ಆಡಳಿತ ನೀಡಿ, ಧರ್ಮ ಸಂರಕ್ಷಣೆಗೈದ ಶಿವಾಜಿ ನಮ್ಮ ಭಾರತೀಯರಿಗೆ ನಿತ್ಯ ಸ್ಮರಣೀಯರು.
ಸುಭಾಷರು ವಿದೇಶಕ್ಕೆ ಹಾರುವ ಮುನ್ನ ತಮ್ಮ ಮಿತ್ರ ವಿಜಯರತ್ನ ಮುಜುಮ್‌ದಾರರೊಡನೆ ಹೇಳಿದರಂತೆ “ಭಾರತದ ಸ್ವಾತಂತ್ರ್ಯ ಸಮರಕ್ಕೆ ಏಕಮಾತ್ರ ಆದರ್ಶವಾಗಿ ನಾವಿಂದು ಶಿವಾಜಿಯನ್ನು ಸ್ವೀಕರಿಸಬೇಕು”. ಈ ಮಾತು ಇಂದಿನ ಭಾರತಕ್ಕೂ ಅನ್ವಯ. ‘ನಮಗೆ ಶಿವಾಜಿ ಅಂತಹ ರಾಷ್ಟ್ರಭಕ್ತ, ಯುಕ್ತಿವಂತ, ಶ್ರೇಷ್ಠ ಆಡಳಿತಗಾರ, ಆಧ್ಯಾತ್ಮ ಜೀವಿ, ಮಾರ್ಗದರ್ಶಕ, ನಾಯಕ ಅತ್ಯಗತ್ಯವಾಗಿ ಬೇಕಾಗಿದ್ದಾರೆ.’
Monday, January 29, 2018
Sunday, January 14, 2018
ಭಾರತೀಯ ಸೈನಿಕ ದಿನದ ಶುಭಾಶಯಗಳು
ಜನವರಿ 15 ರಂದು ಭಾರತದಲ್ಲಿ ಆರ್ಮಿ ಡೇ ಪ್ರತಿವರ್ಷವೂ ಉತ್ಸಾಹದಿಂದ ಆಚರಿಸಲಾಗುತ್ತದೆ. ಭಾರತದ ಮೊದಲ ಲೆಫ್ಟಿನೆಂಟ್ ಜನರಲ್, ಕೆ. ಎಮ್. ಕ್ಯಾರಿಯಪ್ಪ (ಕೊಡಂಡೇರಾ ಮದಪ್ಪ ಕ್ಯಾರಿಯಪ್ಪ) ಅವರು ಮೊದಲ ಭಾರತೀಯ ಸೈನ್ಯದ ಕಮಾಂಡರ್ ಇನ್ ಚೀಫ್ನ ಗೌರವವನ್ನು ಆಚರಿಸಲು ಪ್ರಾರಂಭಿಸಿದರು. ಅನೇಕ ಸೇನಾ ಪ್ರದರ್ಶನಗಳನ್ನು ಒಳಗೊಂಡಂತೆ ಸೈನ್ಯದ ಮೆರವಣಿಗೆಗಳನ್ನು ಸಂಘಟಿಸುವ ಮೂಲಕ ಪ್ರತಿವರ್ಷ ಇದನ್ನು ಆರ್ಮಿ ಕಮಾಂಡ್ ಪ್ರಧಾನ ಕಚೇರಿ ಮತ್ತು ರಾಷ್ಟ್ರೀಯ ರಾಜಧಾನಿಯಲ್ಲಿ ಆಚರಿಸಲಾಗುತ್ತದೆ.
ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾಗ ತಮ್ಮ ಜೀವವನ್ನು ತ್ಯಾಗ ಮಾಡಿದ ಎಲ್ಲ ಶ್ರೇಷ್ಠ ವ್ಯಕ್ತಿಗಳನ್ನು ನಾನು ವಂದಿಸುತ್ತೇನೆ.
ಭಾರತ ಮಾತಾಕೀ ಜೈ
ವಂದೇ ಮಾತರಂ
Saturday, January 13, 2018
Friday, January 12, 2018
Thursday, January 11, 2018
Tributes to former PM Shri LalBahadurShastri ji on his death anniversary. Jai Jawan Jai Kisan!
ಭಾರತದ ಅಮೂಲ್ಯ ರತ್ನ - ಡಾ.ಲಾಲ್ ಬಹದ್ದೂರ್ ಶಾಸ್ತ್ರಿ,ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ. "ಜೈ ಜವಾನ್ ಜೈ ಕಿಸಾನ್" ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಅಜಾತ ಶತ್ರು ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಿ . ಇಂದು (ಜನವರಿ 11) ಅವರ ಪುಣ್ಯ ತಿಥಿ .
Friday, December 29, 2017
ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದ ಶುಭಾಶಯಗಳು
ರಾಷ್ಟ್ರ ಕವಿ ಕುವೆಂಪು ರವರ ಹುಟ್ಟು ಹಬ್ಬದ ದಿನವಾದ ಇಂದು ವಿಶೇಷವಾಗಿ ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುವುದು.
ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು.
ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು.
ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು.
ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು.
***ಕಾದಂಬರಿಗಳು+++
ಕಾನೂರು ಹೆಗ್ಗಡತಿ (ಚಲನ ಚಿತ್ರವಾಗಿದೆ)
ಮಲೆಗಳಲ್ಲಿ ಮದುಮಗಳು (ಧಾರಾವಾಹಿಯಾಗಿದೆ)
***ನಾಟಕಗಳು*--
ಬೆರಳ್ಗೆ ಕೊರಳ್
ಶೂದ್ರ ತಪಸ್ವಿ
ಸ್ಮಶಾನ ಕುರುಕ್ಷೇತ್ರ
ರಕ್ತಾಕ್ಷಿ
ಬಿರುಗಾಳಿ
ಯಮನ ಸೋಲು
ನನ್ನ ಗೋಪಾಲ (ಮಕ್ಕಳ ನಾಟಕ)
ವಾಲ್ಮೀಕಿಯ ಭಾಗ್ಯ
ಮಹಾರಾತ್ರಿ
ಜಲಗಾರ
ಚಂದ್ರಹಾಸ
ಬಲಿದಾನ
ಮೋಡಣ್ಣನ ತಮ್ಮ (ಮಕ್ಕಳ ನಾಟಕ)
***ಕಾವ್ಯಗಳು***
ಶ್ರೀ ರಾಮಾಯಣ ದರ್ಶನ೦
ಕೊಳಲು
ಅಗ್ನಿಹಂಸ
ಅನಿಕೇತನ
ಅನುತ್ತರಾ
ಇಕ್ಶುಗಂಗೋತ್ರಿ
ಕದರಡಕೆ
ಕಥನ ಕವನಗಳು
ಕಲಾಸುಂದರಿ
ಕಿಂಕಿಣಿ
ಕೃತ್ತಿಕೆ
ಜೇನಾಗುವ
ನವಿಲು
ಪಕ್ಷಿಕಾಶಿ
ಚಿತ್ರಾಂಗದಾ
ಪ್ರೇತಕ್ಯು
ಪ್ರೇಮಕಾಶ್ಮೀರ
ಮಂತ್ರಾಕ್ಷತೆ
ಷೋಡಶಿ
ಹಾಳೂರು
ಕೋಗಿಲೆ
ಪಾಂಚಜನ್ಯ
ಕುಟೀಚಕ
***ಕಥಾಸಂಕಲನ : **
ನನ್ನ ದೇವರು ಮತ್ತು ಇತರ ಕಥೆಗಳು
ವಿಮರ್ಶೆ : ದ್ರೌಪದಿಯ ಶ್ರೀಮುಡಿ
ಜೀವನ ಚರಿತ್ರೆ : ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ
ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು :--
1956-ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ.
1957-ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷ ಪದವಿ.
1964-ರಾಜ್ಯ ಸರ್ಕಾರದಿಂದ ರಾಷ್ಟ್ರ ಕವಿ ಬಿರುದಿನ ಗೌರವ.
1968-ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ.
1968-ರಾಷ್ಟ್ರಪತಿಗಳಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ.
1988-ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ ಪ್ರದಾನ.
1992-ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ.
1956ರಿಂದ95- 8 ಬೇರೆ-ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
Tuesday, July 25, 2017
Friday, September 13, 2013
Subscribe to:
Posts (Atom)





